May 19, 2009

Hi,

My article has been published in today's Vijaykarnataka daily (19-05-09).

I am keen to learn your views on this. Will you post your comments about this article?

-S.Sureshkumar

http://vijaykarnatakaepaper.com/epaper/svww_index1.php

6 comments:

Shree said...

Good one, Sir. It's really challenging for EC, but nowadays everything is going smooth. Regarding money-power, I completely agree with you.

Ugly Programmer said...

yep..thats right..EC conducting elections freely...but still long way to go ..steps are to be taken to stop the party hopping at the time of elections...

Subbu said...

The article set me thinking. It is unfortunate that the bureaucracy needs constant and close monitoring by a constitutional body to function effectively and impartially. It is obvious that the fear of getting punished by the Election Commission made our officials to work sincerely during elections.

But the admission by an official that Rs. 32 crores was spent by three candidates raises an all important question. Were the elections really conducted freely and why didn’t the officials prevent the candidates from spending such huge money? More stringent laws and further strengthening of the Election Commission might be the solution.

The results in Bellary have clearly demonstrated that money power can not win elections every time.

c said...

Dear Suresh

You might have read it already. Just in case you haven't, this is one of the best post-poll analyses that i have read not just in Kannada journalism but in the entire Indian journalism:
http://www.prajavani.net/Content/May182009/Dinesh20090517129009.asp

Vishwanath said...

ಸುರೇಶ್ ಕುಮಾರ್ ಅವರಿಗೆ,
ನಮಸ್ಕಾರ.
ಚುನಾವಣಾ ಆಯೋಗ ಕುರಿತ ನಿಮ್ಮ ಅಭಿಪ್ರಾಯ, ಕಳಕಳಿ, ವಿಶ್ಲೇಷಣೆ ಚೆನ್ನಾಗಿತ್ತು. ಕಡಿಮೆ ಮತದಾನವಾಗುವ ಬಗ್ಗೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದೀರಿ. ನನಗನ್ನಿಸಿದ ಪ್ರಕಾರ ಮತದಾನ ಕಡ್ಡಾಯ ಮಾಡುವುದೊಂದೇ ಇದಕ್ಕೆ ಪರಿಹಾರ. ಮತದಾನ ಕಡ್ಡಾಯ ಮಾಡುವುದಾದರೆ, ಯೋಗ್ಯ ಅಭ್ಯರ್ಥಿಗಳು ಕಣದಲ್ಲಿರುವಂತೆ ನೋಡಿಕೊಳ್ಳುವ ಅಧಿಕಾರವೂ ಚುನಾವಣಾಧಿಕಾರಿಗಳಿಗೆ ಇರಬೇಕು.
ನಾನು ಹೀಗೆ ಏಕೆ ಹೇಳುತ್ತಿದ್ದೇನೆಂದರೆ, ಈಚಿನ ದಿನಗಳಲ್ಲಿ ಹತ್ತು ಜನ ಚುನಾವಣಾ ಕಣದಲ್ಲಿದ್ದಾರೆಂದರೆ, ಅವರ ಮೇಲೆ ಒಂದಿಲ್ಲೊಂದು ಹಗರಣಗಳು, ಕ್ರಿಮಿನಲ್ ಕೇಸುಗಳು ಇದ್ದೇ ಇರುತ್ತವೆ. ಹಗರಣಗಳಿಲ್ಲದೇ ಸಾಚಾ ವ್ಯಕ್ತಿಯಾದರೆ, ಆತ ಅಥವಾ ಆಕೆ ಎಲೆಕ್ಷೆನ್ ನಲ್ಲಿ ಆಯ್ಕೆಯಾಗಿ ಬೆಂಗಳೂರು, ದಿಲ್ಲಿಯತ್ತ ಮುಖ ಮಾಡಿದವರು ಮತ್ತೆ ಮನೆ-ಮನೆ ಗೆ ಭೇಟಿ ನೀಡಲು ಬರುವುದು ಮುಂದಿನ ಚುನಾವಣೆಯಲ್ಲಿಯೇ.

ಹೀಗೆ ಮನೆ ಮನೆಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದಕ್ಕಾದರೂ ಮತ ಹಾಕೋಣ ಅಂದರೆ ಅವರು ಕೊಡುವ ಭರವಸೆಗಳಾದರೂ ಎಂಥವು? ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರುತ್ತೇನೆ, ಅಮೇರಿಕ ಮಾದರಿಯಲ್ಲಿ ಸರಕಾರ ಮಾಡುತ್ತೇನೆ, ಆರು ಜನ ಗೆಲ್ಲಿಸಿಕೊಟ್ರೆ ಕಿಂಗ್ ಮೇಕರ್ ಆಗುತ್ತೇನೆ, ೨೦ ಜನ ಗೆಲ್ಲಿಸಿದರೆ ಸರಕಾರ ನೆಲಸಮ ಮಾಡ್ತೇನೆ, ೨೪ ಗಂಟೆ ಪಬ್ ಓಪನ್ ಮಾಡ್ತೇನೆ... ಇಂಥವೇ ಮಾತುಗಳು. ಒಬ್ಬ ಅಭ್ಯರ್ಥಿ ತಾನು ಗೆದ್ದರೆ ತನಗೆ ಯಾವ ಮಂತ್ರಿಗಿರಿ ಸಿಗಬಹುದು, ಯಾವ ಮಾಡೆಲ್ ಗೂಟದ ಕಾರು ಹತ್ತಬಹುದು... ಇನ್ನೂ ಏನೇನೋ ಯೋಚಿಸುತ್ತಾನೋ ಅದೇ ರೀತಿ ಮತದಾರ ಕೂಡ ಜನಪ್ರತಿನಿಧಿಯಿಂದ ನಮ್ಮ ನಲ್ಲಿಯಲ್ಲಿ ದಿನಾ ನೀರು ಬರುವಂತಾಗಲಿ, ಎರಡು ವರ್ಷದ ಮಗುವಿಗೆ ೨೫ ಸಾವಿರ ಫೀಸು ವಸೂಲು ಮಾಡುವ ಶಾಲೆಗಳನ್ನು ಮಟ್ಟ ಹಾಕಲಿ, "ಜನಸೇವಕರು" ಅರಮನೆಯಂಥ ಬಂಗ್ಲೆಯಲ್ಲಿರುವಾಗ ಬೆಂಗಳೂರಿನಂಥ ಊರಿನಲ್ಲಿ ಗಂಡ, ಹೆಂಡ್ತಿ, ಮಗುವಿನ ಚಿಕ್ಕ ಸಂಸಾರಕ್ಕೊಂದು ಪುಟ್ಟ ಸ್ವಂತ ಮನೆ ಸಿಗುವಂತಾಗಲಿ, ಇವತ್ತಿರುವ ಉದ್ಯೋಗ ನಾಳೆ ಹೋಗಿ ಕುಟುಂಬ ಬೀದಿ ಪಾಲಾಗದಂತಾಗಲಿ... ಎಂಬಂಥವೆ ಆಸೆ-ನಿರೀಕ್ಷೆಗಳನ್ನಿಟ್ಟುಕೊಂಡಿರ್ತಾನೆ. ಆದರೆ ಆತನ ನಿರೀಕ್ಷಣಾ ಪಟ್ಟಿಯಲ್ಲಿರುವ ಒಂದು ವಿಷಯದ ಬಗ್ಗೆಯಾದರೂ ನಮ್ಮ ಅಭ್ಯರ್ಥಿಗಳು ಬಾಯಿ ಬಿಚ್ಚುತ್ತಾರಾ? ತನ್ನ ಸಂಕಷ್ಟದ ಸುಳಿಯಲ್ಲೇ ಸಿಲುಕಿ ಆತ ಒದ್ದಾಡುತ್ತಿರುವಾಗ ಆತ
ಇನ್ನೊಬ್ಬರ ಉದ್ಧಾರಕ್ಕೆ ಏಕೆ ಮತ ಹಾಕಬೇಕು, ಸರ್?

ನನಗೆ ಕಾಡುವ ಪ್ರಶ್ನೆಗೆ ತಮ್ಮ ಬಳಿ ಉತ್ತರವಿದ್ದರೆ ತಿಳಿಸಿ. ಅದೆಂದರೆ:
ಕೆಲವೇ ವರ್ಷಗಳ ಹಿಂದೆ ಸಾಮನ್ಯ ವ್ಯಕ್ತಿಯಂತಿದ್ದವರು ಶಾಸಕ, ಸಂಸದ, ಮಂತ್ರಿ ಯಾದ ತಕ್ಷಣ ಹತ್ತಾರು-ನೂರಾರು ಕೋಟಿ ರೂಪಾಯಿಗಳ ಒಡೆಯರಾಗುವುದು ಹೇಗೆ? (ಅವರೇ ಘೋಷಿಸಿದ ಆಸ್ತಿಯ ಪ್ರಕಾರ ಇಷ್ಟು. ಘೋಷಿಸದೇ ಇರುವುದು ಇದರ ಹತ್ತು ಪಟ್ಟು ಇರಬಹುದು ಎಂಬುದು ಸಾರ್ವಜನಿಕರ ಸಂಶಯ). ನಾವು ದಿನಕ್ಕೆ ಹತ್ತು ತಾಸು ದುಡಿದು, ನಿಯತ್ತಾಗಿ ತೆರಿಗೆ ಕಟ್ಟಿದರೂ ಸಾಯುವ ತನಕವೂ ನಮ್ಮದೇ ಆದ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಇದೇಕೆ ಹೀಗೆ?

ಇಷ್ಟೆಲ್ಲಾ ನೋವುಗಳನ್ನು ಇಟ್ಟುಕೊಂಡಿರುವ ಮತದಾರ ಮತದಾನದ ಪ್ರಮಾಣವನ್ನು ಏಕೆ ಹೆಚ್ಚಿಸಬೇಕು?
ಎಲ್ಲ ಅಭ್ಯರ್ಥಿಗಳೂ, ಮತದಾರರೂ ಹೀಗೆ ಇರುತ್ತಾರೆ ಎಂದಲ್ಲ. ಇದಕ್ಕೆ ಉತ್ತಮ ಉದಾಹರಣೆ ಧಾರವಾಡ ಲೋಕಸಭಾ ಕ್ಷೇತ್ರದ ಪ್ರಹ್ಲಾದ್ ಜೋಷಿಯವರ ಭರ್ಜರಿ ಜಯ. ಮತದಾರರ ಬಗೆಗೆ ಜೋಷಿ ಅವರಿಗಿರುವ ಕಳಕಳಿ, ತಮ್ಮ ಸಂಸದನ ಮೇಲೆ ಜನರಿಗಿರುವ ಪ್ರೀತಿಯೇ ಆ ಪರಿಯ ಮತದಾನ ಹಾಗೂ ಭಾರಿ ಮತಗಳ ಅಂತರದಿಂದ ಜಯವಾಗಿದ್ದು ಎಂಬುದು ನನ್ನ ಅಭಿಪ್ರಾಯ.
ಮತದಾನದ ಪ್ರಮಾಣ ಹೆಚ್ಚಾಗಲು ಇರುವ ಒಂದೇ ಮಾರ್ಗವೆಂದರೆ, ಕೆಲಸ ಮಾಡದ ಜನಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರವನ್ನು ಜನರಿಗೆ ನೀಡಬೇಕು. ಆಗ ಮಾತ್ರ ಜನಪ್ರತಿನಿಧಿಗಳಲ್ಲೂ ಉತ್ತರದಾಯಿತ್ವ ಹೆಚ್ಚುತ್ತದೆ ಹಾಗೂ ಜನರಿಗೂ ಮತ ಚಲಾಯಿಸಬೇಕು ಎಂಬ ಭಾವನೆ ಬರುತ್ತದೆ.

ನಮಸ್ಕಾರ.
ವಿಶ್ವನಾಥ ಬಸವನಾಳಮಠ

Anonymous said...

Needs Improvement,
Constant upgradation is required at your speed