June 09, 2010

NEW ARTICLE IN VIJAY KARNATAKA 09-06-2010

Hi, 

A New article in today's vijay karnataka. Selfless Gratitude either at personal or social level are crucial in order we repose faith in the system. I have tried to narrate two instances on this. Pls read on and offer your comments.


Best regards

S.Sureshkumar

4 comments:

ಕಲ್ಯಾಣ ರಾಮನ್ ಚಂದ್ರಶೇಖರನ್ said...

ಮಾನ್ಯ ಸುರೇಶ್ ಕುಮಾರ್,

ಇಂದಿನ ವಿ.ಕ. ದಲ್ಲಿನ ನಿಮ್ಮ ಲೇಖನ "ಸಂಪಿಗೆಯ ಭರವಸೆ ಕಂಪು ಪಸರಿಸಲಿ ಎಲ್ಲೆಡೆ" ಯಲ್ಲಿ ಹೈದರಾಬಾದಿನಲ್ಲಿ ನಡೆದಿದೆ (ವಿಕಲಚೇತನ ಬಾಲಕಿಯರ ಕ್ರೀಡಾಕೂಟ) ಎಂದು ಘಟನೆಯೊಂದನ್ನು ಬರೆದಿದ್ದೀರ.
೨೦೦೫ನೇ ಫೆಬ್ರವರಿಯಲ್ಲಿ ಇದೇ ವಿಷಯ ಕುರಿತಾಗಿ ವಿ.ಕ. ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಸಹ ತಮ್ಮ ನೂರೆಂಟುಮಾತು ಅಂಕಣದ "ಮಮತೆಯನ್ನು ಉಸಿರಾಡುವ ಹೃದಯವಂತ ಮಾತ್ರ ಎಲ್ಲರಿಗೂ ಅಮ್ಮನಾಗಬಲ್ಲ" ಎಂಬ ಲೇಖನದಲ್ಲಿ ಉಲ್ಲೇಖಿಸಿದ್ದರು. ಅದರ ಲಿಂಕ್ ಇಲ್ಲಿದೆ ಗಮನಿಸಿ http://thatskannada.oneindia.in/column/bhat/2005/190305kindness.html

ಈ ರೀತಿಯ ಯಾವುದೇ ಘಟನೆ ಹೈದರಾಬಾದಿನಲ್ಲಿ ನಡೆದಿಲ್ಲ. ಇದು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಒಂದು ಕಲ್ಪಿತ ಮಿಂಚೆ (ಇ-ಮೇಲ್) ಮಾತ್ರ. ೧೯೭೬ ರಲ್ಲಿ ಸಿಯಾಟಲ್ ನಲ್ಲಿ ನಡೆದ ವಿಶೇಷ ಒಲಂಪಿಕ್ಸ್ ನಲ್ಲಿ ನಡೆದಿದೆ ಎಂದು ಕೆಲವರು ಹೇಳುತ್ತಾರೆ. ಕೆಲವರು ಇದು ಕಟ್ಟು ಕತೆ ಅಂತ ಸಹ ಹೇಳಿದ್ದಾರೆ. ಈ ಲಿಂಕ್ ಗಮನಿಸಿ http://www.snopes.com/glurge/special.asp
ಶುಭಾಶಯ
ಕಲ್ಯಾಣ ರಾಮನ್ ಚಂದ್ರಶೇಖರನ್
ಬೆಂಗಳೂರು.
http://kalyana-raman.blogspot.com

ಮಧುಕೇಶ ಉಮಾಶಂಕರ್ ಹಿರೇಮಠ said...

ಈ ದಿನದ ಲೇಖನ ಚೆನ್ನಾಗಿದೆ ....ನಾವು ವಯಕ್ತಿಕ ವಾಗಿ ಹೇಗೆ ಬಧುಕಬೇಕು ಎಂದು ಸೊಗಸಾಗಿ ನಿರೂಪಿಸಿದೀರಿ .
ನಿಮ್ಮ ಈ ಪ್ರಯತ್ನ ದಿಂದ ಕೆಲವರಾದರು ಬದಲಾದರೆ ಸಾಕು .ಈ ಪ್ರಯತ್ನತ್ಕ್ಕೆ ಅಭಿನಂದನೆಗಳು .
This article definately will have atleast slightest of slightest impact on our politicians.Good one Sir.
--
ಮಧುಕೇಶ ಉಮಾಶಂಕರ್ ಹಿರೇಮಠ

ಪ್ರಸಾದ್ ಸೇನ್ said...

Sir,

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಈ ಲೇಖನ ಓದಿದೆ. ಈ ಕಾಲದಲ್ಲೂ ಇಂಥಹ ಪ್ರಾಮಾಣಿಕರಿದ್ದಾರೆಯೇ ಎನಿಸಿತು, ಸಂತೋಷವಾಯಿತು ಕೂಡ.
ಕೊನೆಯಲ್ಲಿ ಬರೆದ "ಇಂತಹ ಶ್ರೀಧರರು, ಸಂಪಿಗೆಗಳು ಹುಡುಕಿದರೆ ನಮ್ಮಲ್ಲಿ ನೂರಾರು ಸಿಕ್ಕೀತೇನೋ" ಎಂಬುದು ಸರಿ. ಆದರೆ ಇಂತಹ ಶ್ರೀಧರರು ರಾಜಕೀಯಕ್ಕೆ ಬರಬೇಕು, ಬಂದರೆ ಅವರನ್ನು ಬೆಂಬಲಿಸುತ್ತೇವಾ ಎನ್ನುವುದೇ ಯಕ್ಷ ಪ್ರಶ್ನೆ!
ಕೇವಲ ಆ ಕ್ಷಣದ/ದಿನದ ಅಗತ್ಯಗಳಿಗಾಗಿ ತಮ್ಮ ಓಟುಗಳನ್ನು ಮಾರಿಕೊಂಡು, ಶಾಶ್ವತವಾದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುವ ಅವಿವೇಕಿ ಮತದಾರರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಮತದಾನ ಮಾಡುತ್ತಿರುವುದು ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಂಡು ತಮ್ಮ ಹಕ್ಕು ಚಲಾಯಿಸಬೇಕಾಗಿದೆ. ಆಗ ಮಾತ್ರ ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣಕ್ಕೆ ಬರಲು ಸಾಧ್ಯ.

ಇಂಥಹ ಪ್ರಾಮಾಣಿಕ ವ್ಯಕ್ತಿ ಹಾಗೂ ಪ್ರಜ್ಞಾವಂತ ಮತದಾರರ ಬಗ್ಗೆ ತಿಳಿಸಿದ ತಮಗೆ ವಂದನೆಗಳು.

ಪ್ರಸಾದ್ ಸೇನ್.

Vijay Inamdar said...

How can one expect zero corruption from indian politicians(except gujarat)as an when heavy spending in elections exists.
Vijay inamdar
dharwad