August 30, 2011

ARTICLE IN KANNDA PRABHA 30-08-2011

Hi,

When the Citizen’s movement against corruption is gaining ground like never before, it is high time for everyone to think and act about root cause of this social and inhuman menace. Fight against corruption should become a passion rather just remain as a fashion..! Please read my views about this in today’s Kannada Prabha.

- S.SURESHKUMAR


3 comments:

raju said...

ಶ್ರೀ ಸುರೇಶ್ ಕುಮಾರ್ ರವರಿಗೆ, ನೀವು ಸಚಿವರಾದ ಹೊಸದರಲ್ಲೇ ನಾನು ನಿಮಗೆ ಹಲವಾರು ಪತ್ರಗಳನ್ನು ಈ ಮೇಲ್ ಮೂಲಕ, ಅಂಚೆ ಮೂಲಕ ಕಳುಹಿಸಿದ್ದೆ. ರಾಜಕಾರಣಿಗಳಲ್ಲಿ ಒಬ್ಬ ಸಜ್ಜನ ರಾಜಕಾರಣಿಯಾಗಿ ಇಂದೂ ಸಹ ಸಜ್ಜನರಾಗಿಯೇ ಉಳಿದಿದ್ದೀರಿ ಅನ್ನೋ ನಂಬಿಕೆಯಿಂದ ಪತ್ರ ಬರೆಯುತ್ತಿದ್ದೇನೆ.
ಅವಕಾಶ, ಻ಅಧಿಕಾರ ಸಿಕ್ಕಾಗ, ಜನರು ಮರೆಯಲಾರದಂತಹ ಕೆಲಸಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆವೂರಬೇಕು. ನಿಮಗೆ ಅವಕಾಶ, ಅಧಿಕಾರ ಎರಡೂ ಸಿಕ್ಕಿದೆ. ಭ್ರಷ್ಟಾಚಾರದ ಬಗ್ಗೆ ನಿಮ್ಮ ಲೇಖನ ಓದಿದೆ. ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳ ನೇಮಕದಲ್ಲಿ ಪಾರದರ್ಶಕತೆ ಬಗ್ಗೆ ಹೇಳಿದ್ದೀರಿ, ಲಂಚವಿಲ್ಲದೇ ನೇಮಕಾತಿಗಳು ನಡೆದಿವೆ ಅನ್ನೋ ನಿಮ್ಮ ವಾದಕ್ಕೆ ನನ್ನ ಸಹಮತವಿದೆ. ಆದರೆ ಭ್ರಷ್ಟಾಚಾರವಿಲ್ಲದೇ ನೇಮಕ ಮಾಡಿದ ಪಿ.ಡಿ.ಓ.ಗಳು, ಈ ಹುದ್ದೆಗಳು ಸೃಷ್ಠಿಯಾದ ದಿನದಿಂದ ಲಂಚ ಪ್ರಕರಣಗಳ ವರದಿ ತರಿಸಿಕೊಂಡು ನೋಡಿ, ಬಹುತೇಕ ಪಿಡಿಓಗಳು ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿರುವ ವರದಿಗಳನ್ನು ಮಾಧ್ಯಮಗಳಲ್ಲಿ ನಾವು ನೋಡುತ್ತಿದ್ದೇನೆ. ನೀವು ಭ್ರಷ್ಟಾಚಾರವಿಲ್ಲದೇ ನಡೆಸಿದ ನೇಮಕಾತಿಯಲ್ಲಿ ನೌಕರಿ ಪಡೆದವರು ಯಾವ ರೀತಿ ನ್ಯಾಯುತವಾಗಿ ಕಾರ್ಯನಿರ್ವಹಿಸಬಹುದಿತ್ತು. ಅದನ್ನು ಮರೆತಿದ್ದಾರೆ ಮಾನವೀಯತೆ ಮರೆತು, ನಮ್ಮ ಜನರ ತೆರಿಗೆ ಹಣದಿಂದ ಸಂಬಳ, ಭತ್ಯೆಗಳನ್ನು ಪಡೆದು, ಭಿಕ್ಷೆಯ ರೂಪದಲ್ಲಿ ಲಂಚಕ್ಕೆ ಕೈಯೊಡ್ಡುತ್ತಿದ್ದಾರಲ್ಲ ಇವರುಗಳಿಗೆ ಮಾನವೀಯತೆ ಇದೆಯೇ?
ಭಾರತೀಯ ದಂಡ ಸಂಹಿತೆ (INDIAN PENAL CODE) ಬಗ್ಗೆ ಪ್ರಸ್ತಾಪಿಸಿದ್ದಿರಿ. ನಮ್ಮ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅದೆಷ್ಟು ಸಾಮಾನ್ಯ ಜನರಿಗೆ ಕಾನೂನಿನ ಈ ಐ.ಪಿ.ಸಿ. ಕೋಡುಗಳ ಬಗ್ಗೆ ತಿಳಿದಿದೆ. ಯಾವ ತಪ್ಪಿಗೆ ಯಾವ ಶಿಕ್ಷೆ ಅದರ ಪ್ರಮಾಣ, ಉದಾ : ಕಳ್ಳತನಕ್ಕೆ ಯಾವ ಶಿಕ್ಷೆ, ವರದಕ್ಷಿಣೆಗೆ ಯಾವ ಶಿಕ್ಷೆ ಎಂಬ ವಿವರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸುವ ಕೆಲಸ ಮಾಡಿದರೆ ಬಹುಶಃ ಅಪರಾಧಗಳ ಪ್ರಮಾಣ ಕಡಿಮೆಯಾಗಬಹುದು.
ಕಾನೂನು ಸಚಿವರಾಗಿ ನಿಮ್ಮಿಂದ ಇಂತಹ ಕಾರ್ಯವನ್ನು ನಿರೀಕ್ಷಿಸಿದ್ದೆ. ಈ ಬಗ್ಗೆ ಪತ್ರಗಳನ್ನು ಬರೆದಿದ್ದೆ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ನೂರರಲ್ಲಿ ನೀವು ಒಬ್ಬರಾದಿರೇನೋ ಅಂತ ಅಂದುಕೊಂಡು ಸುಮ್ಮನಾದೆ.
ಈಗಲೂ ಉಳಿದ 21 ತಿಂಗಳ ಅವಧಿಯಲ್ಲಿ ಭಾರತೀಯ ದಂಡ ಸಂಹಿತೆ (INDIAN PENAL CODE)ಇದರ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ವಿಚಾರದಲ್ಲಿ ಒಮ್ಮೆ ಯೋಚಿಸಿದರೆ ಖಂಡಿತಾ ನಿಮ್ಮಿಂದ ಸಾಧ್ಯ. ಇದಕ್ಕೆ ಹೆಚ್ಚಿಗೆ ಖರ್ಚಿನ ಸಮಸ್ಯೆಯಿಲ್ಲ. ಸ್ರ್ತೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು, ಸಾಮಾಜಿಕ ಕಳಕಳಿಯ ಸಂಘಟನೆಗಳು, ವಕೀಲರು, ಮಾಧ್ಯಮಗಳ ಸಹಕಾರದಿಂದ ಜನರಿಗೆ ಅತೀ ಮುಖ್ಯವಾದ ಕಾನೂನಿನ ಬಗ್ಗೆ ಐ.ಪಿ.ಸಿ. ಬಗ್ಗೆ ಸರಳೀಕರಿಸಿ, ಸಣ್ಣ ಪುಸ್ತಕಗಳ ಮೂಲಕ, ತಿಳಿಸುವ ಕೆಲಸ ಮಾಡಬಹುದು, ಗ್ರಾಮ ಸಭೆಗಳಲ್ಲಿ ಇವರ ಬಗ್ಗೆ ಪ್ರಸ್ತಾಪಿಸಸಬಹುದು. ಎಲ್ಲಾ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ವಕೀಲರುಗಳು ಇದ್ದೇ ಇರುತ್ತಾರೆ. ಅವರುಗಳನ್ನು ಸಾಮಾಜಿಕ ಸೇವೆಗೆ ಕಾರ್ಯಾಗಾರಕ್ಕೆ ಬಳಸಿಕೊಂಡು ಯಶಸ್ವಿಯಾಗಬಹುದು. ಇದರಲ್ಲಿ ಯಾವುದೇ ಭ್ರಷ್ಟಾಚಾರ ನುಸುಳಲಾರದು. ಈ ಕೆಲಸವನ್ನು ನಿಮ್ಮಿಂದ ಇನ್ನೂ ಸಹ ನಿರೀಕ್ಷಿಸುತ್ತಾ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತಿದ್ದೇನೆ.
ರಾಜು ವಿನಯ್ ದಾವಣಗೆರೆ
rajudavanagere@gmail.com
http://bharateeyadandasamhite.blogspot.com/
http://rajuvinaydavanagere.blogspot.com/

rsctt said...

FIGHTING FOR JUSTICE AND EQUALITY ARE ALWAYS ADMIRABLE TRAITS.cORRUPTION SHOULD HAVE NO PART IN GOVERNMENT

A Marilac. said...

Congratulations for your dedication in this blog!!



Bye bye!!